ಕಪಿಲ್ ಪ್ರಥಮ ಬಾರಿಗೆ ನಿರ್ದೇಶಿಸುತ್ತಿರುವ ತಾಯಂದಿರ ದಿನದಂದು ತಾಯಿಲ್ಲದೆ ನಾನಿಲ್ಲ ಗೆ ಹಾಡುಗಳು
Posted date: 15 Thu, May 2014 – 03:19:30 PM

ತಾಯಿ-ಮಗನ ಬಾಂಧವ್ಯದ ಮಹತ್ವವನ್ನು ಹೇಳುವಂಥ ಕಥೆ ಹೊಂದಿದ ತಾಯಿಲ್ಲದೆ ನಾನಿಲ್ಲ ಎಂಬ ಚಿತ್ರದ ಹಾಡುಗಳ ಧ್ವನಿಮುದ್ರಣ ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಕಳೆದ ಭಾನುವಾರ ತಾಯಂದಿರ ದಿನದಂದು ನೆರವೇರಿತು. ನೃತ್ಯ ನಿರ್ದೇಶಕನಾಗಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿರುವ ಕಪಿಲ್ ಪ್ರಥಮ ಬಾರಿಗೆ ನಿರ್ದೇಶಿಸುತ್ತಿರುವ ಈ ಚಿತ್ರ ಕನ್ನಡ, ತಮಿಳು ಹಾಗೂ ತೆಲುಗು ಸೇರಿ ೩ ಭಾಷೆಗಳನ್ನು ನಿರ್ಮಾಣವಾಗುತ್ತಿದೆ.  ತೆಲುಗಿನಲ್ಲಿ ಅಮ್ಮಲೇಖ ನೇನು ಲೇನು ಹಾಗು ತಮಿಳಿನಲ್ಲಿ ತಾಯಿಲ್ಲಾಳ್ ನಾನಿಲ್ಲೈ ಹೆಸರಿನೊಂದಿಗೆ ತಯಾರಾಗುತ್ತಿರುವ ಈ ಚಿತ್ರವನ್ನು ತಂತ್ರಜ್ಞರೆಲ್ಲ ಸೇರಿ ನಿರ್ಮಿಸುತ್ತಿರುವುದು ವಿಶೇಷ. ಜೋ ಜೋ ಲಾಲಿ ಓ ನನ್ನ ಕಂದ ಅಮ್ಮನ ನೋಡು ಈಗ ಅಳಬೇಡ ಎಂಬ ಹಾಡಿನೊಂದಿಗೆ ಒಟ್ಟು ೬ ಹಾಡುಗಳನ್ನು ಕಲಾಕಾರ್ ಗೋಪಿ

ಚಿತ್ರಕ್ಕೆ ಕಲಾಕಾರ್ ಗೋಪಿ ಸಂಗೀತ, ಸಿ.ನಾರಾಯಣ್ ಛಾಯಾಗ್ರಹಣ, ವಿಜಯ್ ಚೆಂಡೂರ್ ಚಿತ್ರಕಥೆ ಸಂಭಾಷಣೆ, ಶ್ರೀಜೌಲಿ ಸಂಕಲನ, ಜಿ.ಮೂರ್ತಿ ಕಲೆ, ಸಂಗೀತ ಸಾಗರ್, ವೈ.ಆರ್.ಪಾಂಡು ಸಾಹಿತ್ಯ, ಸುಪ್ರೀಂ ಸುಬ್ಬು ಸಾಹಸ, ಎಂ.ಸಿ.ಹೇಮಂತ್‌ಗೌಡ ಕಾರ್ಯಕಾರಿ ನಿರ್ಮಾಪಕರಾಗಿದ್ದು ತನ್ಮಯಿ, ಪದ್ಮಿನಿ, ವೆಂಕಟೇಶ್ ತಾರಾಬಳಗದಲ್ಲಿದ್ದು ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ.  

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed